Shyam StutiShyam Stuti
Join

Varalakshmi Vrat Puja Vidhi Samagri Kannada

Dedicated to Goddess Lakshmi.

Join
1
ವರಮಹಾಲಕ್ಷ್ಮಿ ಪೂಜೆ ಸಾಮಗ್ರಿ:
2
ದೇವಿಯ ಮುಖ
3
ಕಲಶ
4
ರೇಷ್ಮೆ ಸೀರೆ
5
ದೇವಿಗೆ ಆಭರಣಗಳು
6
ದೇವತೆಯ ಹಿಂದೆ ಇಡುವ ಕನ್ನಡಿ
7
ಸಿಪ್ಪೆ ಸಹಿತ 3 ತೆಂಗಿನಕಾಯಿ
8
ಹೂಗಳು
9
ಮಣಿಕಟ್ಟಿಗೆ ಕಟ್ಟಿಕೊಳ್ಳಲು ಹಳದಿ ದಾರ
10
ಮರದ ಪೀಠ
11
ತಾಜಾ ಹೂವುಗಳಿಂದ ಮಾಡಿದ ಹಾರ
12
ವೀಳ್ಯದೆಲೆ
13
ಅಡಿಕೆ
14
ಬಾಳೆಹಣ್ಣು
15
ಹಣ್ಣು
16
ಅರಿಶಿನ
17
ಚಂದನ
18
ಕುಂಕುಮ
19
ಬಿಳಿ ರಂಗೋಲಿ ಪುಡಿ
20
ಅಕ್ಷತೆ
21
ಅಕ್ಕಿ
22
ಎಣ್ಣೆ ದೀಪ
23
ಧೂಪದ್ರವ್ಯ
24
ಕರ್ಪೂರ
25
ತಟ್ಟೆ
26
ವರಮಹಾಲಕ್ಷ್ಮಿ ಪೂಜೆ ಮಾಡುವ ವಿಧಾನ :
27
ವರಮಹಾಲಕ್ಷ್ಮಿ ಪೂಜೆ ದಿನ ಬೇಗ ಎದ್ದು ಸ್ನಾನ ಮಾಡಿ.
28
ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸೂರ್ಯಾಸ್ತದವರೆಗೆ ಅಥವಾ ಪೂಜೆ ಮುಗಿಯುವವರೆಗೆ ಮುಂದುವರಿಯುತ್ತದೆ.
29
ಗಂಗಾಜಲದಿಂದ ಅಥವಾ ಸಾಮಾನ್ಯ ನೀರಿನಿಂದ ಪೂಜಾ ಸ್ಥಳವನ್ನು ಶುದ್ಧೀಕರಿಸಿ.
30
ಮರದ ಮಣೆ ಅಥವಾ ಪೀಠದ ಮೇಲೆ ನೀರಿನಲ್ಲಿ ಬೆರೆಸಿದ ಅರಿಶಿನವನ್ನು ಹಚ್ಚಿ ಮತ್ತು ನಂತರ ಅಕ್ಕಿ ಪುಡಿಯಿಂದ ರಂಗೋಲಿಯನ್ನು ಹಾಕಿ.
31
ನಂತರ ಪೀಠದ ಮಧ್ಯದಲ್ಲಿ ಸ್ವಲ್ಪ ಅಕ್ಷತೆ ಹಾಕಿ ಮತ್ತು ಅದರ ಮೇಲೆ ಲೋಹದ ತಟ್ಟೆಯನ್ನು ಇರಿಸಿ.
32
ತಟ್ಟೆಯಲ್ಲಿ ಹಸಿ ಅಕ್ಕಿಯನ್ನು ಸಮವಾಗಿ ಹರಡಿ.
33
ಅರಿಶಿನ ಮತ್ತು ಕುಂಕುಮವನ್ನು ಕಲಶದ ಮೇಲೆ ಹಚ್ಚಿ ಮತ್ತು ತಟ್ಟೆಯ ಮಧ್ಯದಲ್ಲಿ ಇರಿಸಿ.
34
ಕಲಶಕ್ಕೆ ನೀರು ಹಾಕಿ ಸ್ವಲ್ಪ ಅಕ್ಷತೆ ಹಾಕಿ, ಕಲಶದ ಮೇಲೆ ಇಡೀ ತೆಂಗಿನಕಾಯಿ ಇರಿಸಿ.
35
ತೆಂಗಿನಕಾಯಿಯ ಮೇಲೆ ಲಕ್ಷ್ಮಿ ದೇವಿಯ ಮುಖವನ್ನು ಹಾಕಿ.
36
ಕಲಶಕ್ಕೆ ಸೀರೆಯನ್ನು ಉಡಿಸಿ, ಆಭರಣಗಳನ್ನು ತೊಡಿಸಿ ಹೂವಿನ ಹಾರವನ್ನು ಹಾಕಿ.
37
ಕನ್ನಡಿಯನ್ನು ದೇವತೆಯ ಹಿಂದೆ ಇರಿಸಿ.
38
ನಂತರ ಎಣ್ಣೆಯ ದೀಪವನ್ನು ಬೆಳಗಿಸಿ.
39
ಹಳದಿ ಬಣ್ಣದ ದಾರವನ್ನು ಲಕ್ಷ್ಮಿ ದೇವಿಯ ಮುಂದೆ ಇಡಿ.
40
ದೇವರನ್ನುಅಲಂಕರಿಸಿದ ನಂತರ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿ.
41
ನಂತರ ವರಲಕ್ಷ್ಮಿ ದೇವಿಗೆ ಸಮರ್ಪಿತವಾದ ಪವಿತ್ರ ಮಂತ್ರಗಳನ್ನು ಪಠಿಸಿ. ನೀವು ಮಹಾಲಕ್ಷ್ಮಿ ಸಹಸ್ರನಾಮ ಸ್ತೋತ್ರವನ್ನು ಸಹ ಪಠಿಸಬಹುದು.
42
ಹೂವುಗಳನ್ನು ಒಂದೊಂದಾಗಿ ಅರ್ಪಿಸಿ ಮತ್ತು ನಂತರ ತಾಂಬೂಲವನ್ನೂ ಅರ್ಪಿಸಿ.
43
ನಂತರ ದೇವಿಗೆ ನೈವೇದ್ಯವನ್ನು ಅರ್ಪಿಸಿ.
44
ನಂತರ ದೇವಿಗೆ ಆರತಿ ಮಾಡಿ ನಿಮ್ಮ ಬಲ ಮಣಿಕಟ್ಟಿನ ಸುತ್ತಲೂ ಪವಿತ್ರ ದಾರವನ್ನು ಕಟ್ಟುವ ಮೂಲಕ ಪೂಜೆಯನ್ನು ಮುಕ್ತಾಯಗೊಳಿಸಿ.
45
ವರಲಕ್ಷ್ಮಿ ವ್ರತದ ನಿಯಮಗಳನ್ನು ತುಂಬಾ ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ವ್ರತವನ್ನು ವಿವಾಹಿತ ಮಹಿಳೆಯರು ಕೈಗೊಳ್ಳುತ್ತಾರೆ. ತಮ್ಮ ಗಂಡ ಹಾಗೂ ಮಕ್ಕಳ ಆರೋಗ್ಯ ವೃದ್ಧಿಸಲು, ಮನೆಯ ಐಶ್ವರ್ಯ ಹೆಚ್ಚಿಸಲು , ಮನೆಯಲ್ಲಿ ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡು ತಾಯೇ ಎಂದು ಲಕ್ಷ್ಮಿಯಲ್ಲಿ ಈ ವ್ರತದ ಮೂಲಕ ಕೇಳಿ ಕೊಳ್ಳಲಾಗುವುದು.
46
ಹಿಂದೂ ಸಂಪ್ರದಾಯದ ಪ್ರಕಾರ ವರಲಕ್ಷ್ಮಿ ವ್ರತ ಪಾಲಿಸಿದರೆ ಅಷ್ಟಲಕ್ಷ್ಮಿಯರನ್ನು ಪೂಜಿಸಿದ್ದಕ್ಕೆ ಸಮ ಎಂದು ಹೇಳಲಾಗುವುದು. ವರಲಕ್ಷ್ಮಿ ವ್ರತ ಪಾಲಿಸಿದರೆ ಐಶ್ವರ್ಯ, ಸಂತಾನ ಭಾಗ್ಯ, ಜ್ಞಾನ, ಪ್ರೀತಿ, ಯಶಸ್ಸು, ಶಾಂತಿ, ಧೈರ್ಯ ಹೀಗೆ ಎಲ್ಲಾ ಐಶ್ವರ್ಯಗಳೂ ದೊರೆಯುವುದು.
47
2021ರಲ್ಲಿ ವರಲಕ್ಷ್ಮಿ ವ್ರತವನ್ನು ಆಗಸ್ಟ್ 20ರಂದು ಆಚರಿಸಲಾಗುತ್ತಿದೆ. ವರಲಕ್ಷ್ಮಿ ವ್ರತದಿಂದ ಅಷ್ಟಲಕ್ಷ್ಮಿಯರನ್ನು ಪೂಜಿಸಲಾಗುವುದು.
48
* ಆದಿ ಲಕ್ಷ್ಮಿ * ಧನ ಲಕ್ಷ್ಮಿ * ಧೈರ್ಯ ಲಕ್ಷ್ಮಿ * ಸೌಭಾಗ್ಯ ಲಕ್ಷ್ಮಿ * ವಿಜಯ ಲಕ್ಷ್ಮಿ * ಧಾನ್ಯ ಲಕ್ಷ್ಮಿ * ಸಂತಾನ ಲಕ್ಷ್ಮಿ * ವಿದ್ಯಾ ಲಕ್ಷ್ಮಿ
49
ವರಲಕ್ಷ್ಮಿ ವ್ರತಕ್ಕೆ ಬೇಕಾಗುವ ಸಾಮಗ್ರಿಗಳು * ಮೊದಲಿಗೆ ಬೇಕಾಗಿರುವುದು ಪೀಠ ಅಂದ್ರೆ ಮಣೆ * ನಂತರ ಪೀಠದ ಮೇಲೆ ಹಾಕಲು ವಸ್ತ್ರ * ರಂಗೋಲಿ ಹಾಕಲು ಅಕ್ಕಿ ಹಿಟ್ಟು * ಎರಡು ತೆಂಗಿನಕಾಯಿ (ಒಂದು ಕಳಶಕ್ಕೆ, ಮತ್ತೊಂದು ಪೂಜೆಗೆ) * ಕಳಶದ ಚೊಂಬು (ತಾಮ್ರ ಅಥವಾ ಬೆಳ್ಳಿಯದ್ದು) * ಕಶಸದ ಚೊಂಬಿಗೆ ತುಂಬಲು ಅಕ್ಕಿ, ಒಣ ಖರ್ಜೂರ, ಗೋಡಂಬಿ, ದ್ರಾಕ್ಷಿ, ಬಾದಾಮಿ, ಕಲ್ಲು ಸಕ್ಕರೆ ಹಾಗೂ ಎಲ ಹಣ್ಣುಗಳು. (ಇದನ್ನು
50
ದೇವಿಯ ಸಮೀಪ ಇಡಲು ಎರಡು ಆನೆಗಳು
51
ಅರಿಶಿನದ ಕೊಂಬು
52
ಹಸಿರು ಬಳೆಗಳು
53
ದೇವಿಗೆ ಉಡಿಸಲು ಸೀರೆ
54
ತಾಂಬೂಲಕ್ಕೆ ಬ್ಲೌಸ್ ಪೀಸ್
55
ಹಾಗೂ ಇನ್ನೂ ಕೆಲವು ಬ್ಲೌಸ್ ಪೀಸ್ಗಳು
56
ಅರಿಶಿಣ
57
ಕುಂಕುಮ
58
ಅಕ್ಷತೆ
59
ಬಿಡಿ ಹೂಗಳು
60
ಶ್ರೀಗಂಧ
61
ವೀಳ್ಯೆದೆಲೆ
62
ಅಡಿಕೆ
63
ಖರ್ಜೂರ
64
ಅಗರ ಬತ್ತಿ
65
ನಾಣ್ಯಗಳು
66
ಮಾವಿನ ಎಲೆಯ ತೋರಣ
67
ಬಾಳೆ ಹಣ್ಣು
68
9 ಬಿಳಿ ದಾರಗಳು
69
ತಿಂಡಿ-ತಿನಿಸುಗಳು
70
ದೀಪದ ಎಣ್ಣೆ ಅಥವಾ ಹಸುವಿನ ತುಪ್ಪ
71
ಬತ್ತಿ
72
ಕರ್ಪೂರ
73
(ಈ ಎಲ್ಲಾ ಸಾಮಗ್ರಿಗಳನ್ನು ಮೊದಲೇ ರೆಡಿ ಮಾಡಿಡಿ)
74
ಬೆಳಗ್ಗೆ ಬೇಗ ಅಂದ್ರೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ ಮನೆಯನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಿ ನೈವೇದ್ಯಕ್ಕೆ ರೆಡಿ ಮಾಡಿ.
75
ಪೂಜೆಯ ಸ್ಥಳದಲ್ಲಿ ಪೂರ್ವಾಭಿಮುಖವಾಗಿ ಎಂಟು ದಳದ ಕಮಲದ ರಂಗೋಲಿ ಹಾಕಬೇಕು. ಮಂಟಪದ ಎರಡೂ ಕಡೆ ದೀಪ ಹಚ್ಚಿಡಬೇಕು. ದೀಪಕ್ಕೆ ಅರಿಶಿಣ ಕುಂಕುಮ, ಹೂ ಇಡಬೇಕು. ನಂತರ ಬಟ್ಟಲಿಗೆ 5 ಮುಷ್ಠಿ ಅಕ್ಕಿ ತೆಗೆದು ಹಾಇ ಅದನ್ನು ಹರಡಿ, ಇದನ್ನು ರಂಗೋಲಿಯ ಮಧ್ಯ ಭಾಗದಲ್ಲಿ ಇಟ್ಟು ಸ್ವಸ್ತಿಕವನ್ನು ಬರೆದು ಕಳಶ ಇಡಬೇಕು.
76
ಕಳಶಕ್ಕೆ ಬೇಕಾದ ಸಾಮಗ್ರಿಗಳನ್ನು ತುಂಬಿ ನಂತರ ಶ್ರೀಗಂಧ ಹಚ್ಚಿ, ಅಕ್ಷತೆ ಹಾಕಿಡಿ. ಅದರ ಮೇಲೆ 5 ವೀಳ್ಯೆದೆಲೆ ಇಡಿ. ಈಗ ತೆಂಗಿನಕಾಯಿಯ ಎರಡು ಕಣ್ಣುಗಳು ಮುಂಭಾಗ ಬರುವಂತೆ ಕಳಶದ ಮೇಲೆ ಇಡಿ. ತೆಂಗಿನಕಾಯಿಗೆ ಮೊದಲೇ ಅರಿಶಿಣ ಹಚ್ಚಿ ಅಲಂಕಾರ ಮಾಡಿ.
77
ಅದರ ಮೇಲೆ ದೇವಿಯ ಮುಖವಾಡ ಇಡಬೇಕು. ನಂತರ ಮುಖವಾಡಕ್ಕೆ ಅರಿಶಿಣ ಕುಂಕುಮ ಹಚ್ಚಿ ಕಾಡಿಗೆ ತೀಡಿ ಅಲಂಕಾರ ಮಾಡಿ. ಅರಿಶಿಣ, ಕುಂಕುಮ, ಬೆಳೆ, ಇತ್ಯಾದಿಗಳನ್ನು ದೇವಿಯ ಪಕ್ಕ ಇಡಿ. ದೇವಿಯ ಎದುರು ಮೂವತ್ತೆರಡು ನಾನ್ಯಗಳನ್ನು ಇಡಬೇಕು. ದೇವಿಗೆ ಮಾಂಗಲ್ಯ ಸರ ಹಾಗೂ ಅರಿಶಿಣ ಕೊಂಬನ್ನು ದಾರದಲ್ಲಿ ಕಟ್ಟಿ ಹಾಕಿ.
78
ನಂತರ ಒಡವೆಗಳಿಂದ ಅಲಂಕರಿಸಿ. ತಾವರೆ ಹೂವನ್ನು ಮುಡಿಸಿ. ಕಳಶದ ಹಿಂದೆ ದೇವಿಯ ಫೋಟೋ ಇಡಬಹುದು. ಐದು ಅಥವಾ ಒಂಭತ್ತು ಬಗೆಯ ಹಣ್ಣುಗಳನ್ನು ಇಡಿ.
79
ನಂತರ ಮಡಲಿಕ್ಕಿ ತಯಾರಿಸಬೇಕು. ಎರಡು ವೀಳ್ಯೆದೆಲೆ, ಅಡಿಕೆ, ಬಳೆ, ಬ್ಲೌಸ್, ಕಾಯಿ, ಅಕ್ಕಿ, ಹೂ, ಹಣ್ಣುಗಳು, ಕೊಬ್ಬರಿ ಇವುಗಳನ್ನು ಬಲಸಿ ತಯಾರಿಸಿ.
80
ಮೊದಲಿಗೆ ಗಣೇಶನನ್ನು ಪೂಜಿಸಿ.
81
ನಂತರ ಪಂಚ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಹೂ ಹಾಕಿ, ಅದರಿಂದ ದೇವಿಗೆ ಪ್ರೋಕ್ಷಣೆ ಮಾಡಿ.
82
ಒಂದು ಪ್ಲೇಟ್ನಲ್ಲಿ ಚಿಕ್ಕ ಲಕ್ಷ್ಮಿಯ ಮೂರ್ತಿ ಇಟ್ಟು, ಅದರಲ್ಲಿ ವೀಳ್ಯದೆಲೆ ಇಟ್ಟು ಅಭಿಷೇಕಕ್ಕೆ ರೆಡಿಯಾದ ಪಂಚಾಮೃತವನ್ನು ಇಡಿ. ಆ ಪಂಚಾಮೃತಕ್ಕೆ ಹೂವನ್ನು ಅದ್ದಿ ದೇವಿಗೆ ಸಮರ್ಪಿಸಿ. ಬಳಿಕ ದೇವಿಗೆ ಅರಿಶಿನ ಕುಂಕುಮ, ಕಾಡಿಗೆ ಹಚ್ಚಿ ಗಂಧಾಕ್ಷತೆ ಹಾಕಬೇಕು.
83
ನಂತರ ದೇವಿಗೆ ಹೂಗಳಿಂದ ಸಹಸ್ರಾಚನೆ ಮಾಡುತ್ತಾ ಪೂಜೆ ಮಾಡಿ. ನಂತರ ಕುಂಕುಮಾರ್ಚನೆ ಮಾಡಬೇಕು, ಅಷ್ಟೋತ್ತರ ಹೇಳುತ್ತಾ ಕುಂಕುಮಾರ್ಚನೆ ಮಾಡಿ. ಬಳಿಕ ಧೂಪ, ದೀಪದಿಂದ ದೇವಿಗೆ ಆರತಿ ನಾಡಿ, ತೆಂಗಿನ ಕಾಯಿ ಒಡೆದು ನೈವೇದ್ಯ ಮಾಡಬೇಕು. ಈಗ ದೇವಿಗೆ ಬಾಳೆಹಣ್ಣು, ಹಾಲಿನ ನೈವೇದ್ಯ ಮಾಡಿ ಕೊನೆಯಲ್ಲಿ ಮಂಗಳಾರತಿ ಮಾಡಿ.
84
ನಂತರ ವರಮಹಾಲಕ್ಷ್ಮಿ ವ್ರತದ ಕತೆ ಪುಸ್ತಕಕ್ಕೆ ಅರಿಶಿನ ಕುಂಕುಮ ಹಚ್ಚಿ, ಹೂವು ಹಾಕಿ ನಮಸ್ಕಾರ ಮಾಡಿ. ವ್ರತದ ಕತೆಯನ್ನು ಓದಿ.
85
ಆರತಿಗೆ ನಮಸ್ಕರಿಸಿ ಅಕ್ಷತೆ ಕೈಯಲ್ಲಿ ತೆಗೆದುಕೊಂಡು ಸಂಕಲ್ಪ ಮಾಡಿ, ಬಳಿಕ ಆ ಅಕ್ಷತೆಯನ್ನು ದೇವಿಗೆ ಹಾಕಿ, ಸುತ್ತು ಬಂದು ನಮಸ್ಕಾರ ಮಾಡಿ.
86
ಹೀಗೆ ಪೂಜೆ ಆದಮೇಲೆ ಒಂಭತ್ತೆಳೆ ದಾರವನ್ನು ಹೂವಿನೊಂದಿಗೆ ಕಟ್ಟಿ ಅದನ್ನು ಮನೆ ಹಿರಿಯರಿಂದ ಕೈಗೆ ಕಟ್ಟಿಸಿಕೊಳ್ಳಿ. ನಂತರ ಮುತ್ತೈದೆಯರಿಗೆ ತಾಂಬೂಲ ನೀಡಿ.
87
ವಿಸರ್ಜನೆ ಮಾಡುವ ಮುನ್ನ ಮಂಗಳಾರತಿ ಮಾಡಿ ಕಳಸದ ಬಲಭಾಗ ಸ್ವಲ್ಪ ಅಲುಗಿಸಿ ನಂತರ ವಿಸರ್ಜನೆ ಮಾಡಬೇಕು.
88
ವರಲಕ್ಷ್ಮಿ ದೇವಿ ವರಲಕ್ಷ್ಮಿ ಪೂಜೆಯ ದಿನವು ಸಂಪತ್ತು ಮತ್ತು ಸಮೃದ್ಧಿಯ ದೇವತೆಯನ್ನು ಪೂಜಿಸುವ ಮಹತ್ವದ ದಿನಗಳಲ್ಲಿ ಒಂದಾಗಿದೆ. ಭಗವಾನ್ ವಿಷ್ಣುವಿನ ಪತ್ನಿಯಾದ ವರಲಕ್ಷ್ಮಿ, ಇದು ಮಹಾಲಕ್ಷ್ಮಿ ದೇವಿಯ ರೂಪಗಳಲ್ಲಿ ಒಂದಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಕ್ಷೀರ ಸಾಗರದಿಂದ ಹೊರಬಂದವಳೀಕೆ. ಅವಳು ಕ್ಷೀರ ಸಾಗರದ ಮೈಬಣ್ಣವನ್ನು ಹೊಂದಿದ್ದಾಳೆ ಮತ್ತು ಅದೇ ಬಣ್ಣದ ಬಟ್ಟೆಗಳನ್ನು ಅಲಂಕರಿಸುತ್ತಾಳೆ ಎಂದು ವಿವರಿಸಲಾಗಿದೆ. ದೇವಿಯ ವರಲಕ್ಷ್ಮಿ ರೂಪವು ವರಗಳನ್ನು ನೀಡುವವಳು ಮತ್ತು ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವವಳು ಎನ್ನುವ ನಂಬಿಕೆಯಿದೆ. ಆದ್ದರಿಂದ ದೇವಿಯ ಈ ರೂಪವನ್ನು ವರ + ಲಕ್ಷ್ಮಿ ಅಂದರೆ ವರಗಳನ್ನು ನೀಡುವ ಲಕ್ಷ್ಮಿ ದೇವತೆ ಎಂದು ಕರೆಯಲಾಗುತ್ತದೆ.
89
ವರಲಕ್ಷ್ಮಿ ವ್ರತ ಶ್ರಾವಣ ಶುಕ್ಲ ಪಕ್ಷದ ಕೊನೆಯ ಶುಕ್ರವಾರದಂದು ವರಲಕ್ಷ್ಮಿ ಉಪವಾಸವನ್ನು ಆಚರಿಸಲಾಗುತ್ತದೆ. ವರಲಕ್ಷ್ಮಿ ವ್ರತವನ್ನು ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸೂಚಿಸಲಾಗಿದೆ. ಆದಾಗ್ಯೂ, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರ ಪ್ರದೇಶಗಳಲ್ಲಿ, ವರಲಕ್ಷ್ಮಿ ಉಪವಾಸವನ್ನು ಮುಖ್ಯವಾಗಿ ವಿವಾಹಿತ ಮಹಿಳೆಯರು ಮಾತ್ರ ಮಾಡುತ್ತಾರೆ. ಲೌಕಿಕ ಸುಖದ ಬಯಕೆಯಿಂದ ವರಲಕ್ಷ್ಮಿ ಉಪವಾಸವನ್ನು ನಡೆಸಲಾಗುತ್ತದೆ ಮತ್ತು ಇದು ಸಂತಾನ, ಸಂಗಾತಿ, ಸೌಭಾಗ್ಯ ಮತ್ತು ಎಲ್ಲಾ ರೀತಿಯ ಐಹಿಕ ಸಂತೋಷಗಳನ್ನು ಒಳಗೊಂಡಿದೆ.
90
ಕೆಲವು ರಾಜ್ಯಗಳಲ್ಲಿ ವರಲಕ್ಷ್ಮಿ ಪೂಜೆಯನ್ನು ಹೆಚ್ಚಾಗಿ ವಿವಾಹಿತ ಮಹಿಳೆಯರು ಪತಿ ಮತ್ತು ಇತರ ಕುಟುಂಬ
91
ಸದಸ್ಯರ ಯೋಗಕ್ಷೇಮಕ್ಕಾಗಿ ಮಾಡುತ್ತಾರೆ. ಈ ದಿನ ವರ-ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಅಷ್ಟಲಕ್ಷ್ಮಿ ಅಂದರೆ ಸಂಪತ್ತು (ಶ್ರೀ), ಭೂಮಿ (ಭೂ), ಕಲಿಕೆ (ಸರಸ್ವತಿ), ಪ್ರೀತಿ (ಪ್ರೀತಿ), ಕೀರ್ತಿ (ಕೀರ್ತಿ), ಶಾಂತಿ (ಶಾಂತಿ), ಆನಂದ (ತುಷ್ಟಿ) ಮತ್ತು ಶಕ್ತಿ (ಪುಷ್ಟಿ) ಈ ಎಂಟು ದೇವತೆಗಳನ್ನು ಪೂಜಿಸುವುದಕ್ಕೆ ಸಮ ಎಂದು ನಂಬಲಾಗಿದೆ. ವರಲಕ್ಷ್ಮಿ ವ್ರತವು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಮತ್ತು ಆಕೆಯ ಅನುಗ್ರಹಕ್ಕೆ ಪಾತ್ರರಾಗಲು ಅತ್ಯಂತ ಸೂಕ್ತವಾದ ದಿನಗಳಲ್ಲಿ ಒಂದಾಗಿದೆ.
92
ವರಲಕ್ಷ್ಮಿ ಪೂಜೆ ಮುಹೂರ್ತ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಲಕ್ಷ್ಮಿ ದೇವಿಯನ್ನು ಪೂಜಿಸಲು ಸೂಕ್ತ ಸಮಯವೆಂದರೆ ಸ್ಥಿರ ಲಗ್ನದ ಸಮಯ. ಸ್ಥಿರ ಲಗ್ನದ ಸಮಯದಲ್ಲಿ ಲಕ್ಷ್ಮಿ ಪೂಜೆಯನ್ನು ಮಾಡಿದರೆ ದೀರ್ಘಾವಧಿಯ ಸಮೃದ್ಧಿಯನ್ನು ಪಡೆಯಬಹುದು ಎನ್ನುವ ನಂಬಿಕೆಯಿದೆ. ವರಮಹಾಲಕ್ಷ್ಮಿ ವ್ರತದಂದು ಲಕ್ಷ್ಮಿ ಪೂಜೆಗೆ ನಾಲ್ಕು ಸ್ಥಿರ ಲಗ್ನಗಳಿರುತ್ತದೆ. ವರಲಕ್ಷ್ಮಿ ಪೂಜೆಗೆ ಯಾವುದೇ ಸೂಕ್ತ ಸಮಯವನ್ನು ಆಯ್ಕೆ ಮಾಡಬಹುದು. ಆದಾಗ್ಯೂ, ಪ್ರದೋಷದೊಂದಿಗೆ ಅತಿಕ್ರಮಿಸುವ ಸಂಜೆಯ ಸಮಯವನ್ನು ಲಕ್ಷ್ಮಿ ದೇವಿಯನ್ನು ಪೂಜಿಸಲು ಅತ್ಯಂತ ಸೂಕ್ತವೆಂದು ಪರಿಗಣಿಸಲಾಗುತ್ತದೆ.
93
ವರಲಕ್ಷ್ಮಿ ವ್ರತ 2021 ಮುಹೂರ್ತ - ಸಿಂಹ ಲಗ್ನ ಪೂಜೆ ಮುಹೂರ್ತ (ಬೆಳಗ್ಗೆ): ಮುಂಜಾನೆ 6:18 ರಿಂದ ಬೆಳಗ್ಗೆ 8:19 ರವರೆಗೆ ಪೂಜೆ ಅವಧಿ: 2 ಗಂಟೆ 1 ನಿಮಿಷಗಳವರೆಗೆ
94
- ವೃಶ್ಚಿಕ ಲಗ್ನ ಪೂಜೆ ಮುಹೂರ್ತ (ಮಧ್ಯಾಹ್ನ): ಮಧ್ಯಾಹ್ನ 12:44 ರಿಂದ ಮಧ್ಯಾಹ್ನ 3:00 ರವರೆಗೆ ಪೂಜೆ ಅವಧಿ: 2 ಗಂಟೆ 16 ನಿಮಿಷಗಳವರೆಗೆ
95
- ಕುಂಭ ಲಗ್ನ ಪೂಜೆ ಮುಹೂರ್ತ (ಸಂಜೆ): ಸಂಜೆ 6:52 ರಿಂದ ಸಂಜೆ 8:25 ರವರೆಗೆ ಪೂಜೆ ಅವಧಿ: 1 ಗಂಟೆ 33 ನಿಮಿಷಗಳವರೆಗೆ
96
- ವೃಷಭ ಲಗ್ನ ಪೂಜೆ ಮುಹೂರ್ತ (ಮಧ್ಯ ರಾತ್ರಿ): 2021 ರ ಆಗಸ್ಟ್ 20 ರ ಶುಕ್ರವಾರದಂದು ಮಧ್ಯ ರಾತ್ರಿ 11:36 ರಿಂದ 2021 ರ ಆಗಸ್ಟ್ 21 ರಂದು ಶನಿವಾರ ಮುಂಜಾನೆ 1:34 ರವರೆಗೆ ಪೂಜೆ ಅವಧಿ: 1 ಗಂಟೆ 58 ನಿಮಿಷಗಳವರೆಗೆ.
97
ವರಲಕ್ಷ್ಮಿ ಪೂಜೆ ವಿಧಿ ವರಲಕ್ಷ್ಮಿ ಪೂಜೆಯ ವಿಧಿ - ವಿಧಾನಗಳು ನಾವು ದೀಪಾವಳಿ ಹಬ್ಬದಲ್ಲಿ ಮಹಾಲಕ್ಷ್ಮಿ ಪೂಜೆಯನ್ನು ಮಾಡುವ ವಿಧಿ - ವಿಧಾನಗಳನ್ನೇ ಹೋಲುತ್ತದೆ. ಆದಾಗ್ಯೂ ಈ ಪೂಜೆ ಹಂತಗಳು ಮತ್ತು ಮಂತ್ರಗಳು ಡೋರಕ ಮತ್ತು ವಯನಕ್ಕೆ ಒಳಗೊಂಡಿದೆ. ವರಲಕ್ಷ್ಮಿ ಪೂಜೆಯ ಸಮಯದಲ್ಲಿ ಕಟ್ಟುವ ಪವಿತ್ರ ದಾರವನ್ನು ಡೋರಕ ಎಂದು ಕರೆಯಲಾಗುತ್ತದೆ ಮತ್ತು ವರಲಕ್ಷ್ಮಿ ಅವರಿಗೆ ನೀಡುವ ಸಿಹಿತಿಂಡಿಗಳನ್ನು ವಯನ ಎಂದು ಕರೆಯಲಾಗುತ್ತದೆ.
98
ವರಮಹಾಲಕ್ಷ್ಮಿ ಪೂಜೆ ಸಾಮಾಗ್ರಿ ಹೂವಿನ ಹಾರ ಕುಂಕುಮ ಅರಶಿಣ ಶ್ರೀಗಂಧದ ಪುಡಿ ಅಥವಾ ಪೇಸ್ಟ್ ವಿಭೂತಿ ಕನ್ನಡಿ ಬಾಚಣಿಕೆ ಮಾವಿನ ಎಲೆಗಳು ಹೂಗಳು ವೀಳ್ಯದೆಲೆ ಪಂಚಾಮೃತ ಮೊಸರು ಬಾಳೆಹಣ್ಣು ಹಾಲು ನೀರು ಅಗರಬತ್ತಿ ಅಥವಾ ಊದುಬತ್ತಿ ಕೆಂಪು ಮತ್ತು ಅರಶಿಣ ಬಣ್ಣದ ಹತ್ತಿ ದಾರ ಸಾಂಬ್ರಾಣಿ ಕರ್ಪೂರ ಘಂಟೆ ಪ್ರಸಾದ ಎಣ್ಣೆ ಹಾಕಿದ ಎರಡು ದೀಪ ಅಕ್ಷತೆ ( ಅಕ್ಕಿ ಭಾಗವಾಗಿರಬಾರದು)

Meaning & Translation

Verse 1
Varamahalakshmi Puja Items:
Verse 2
Goddess's face (idol/mask)
Verse 3
Pot
Verse 4
Silk saree
Verse 5
Ornaments for the Goddess
Verse 6
Mirror to be placed behind the deity
Verse 7
3 coconuts with husk
Verse 8
Flowers
Verse 9
Yellow thread to tie on the wrist
Verse 10
Wooden plank/pedestal
Verse 11
Garland made of fresh flowers
Verse 12
Betel leaves
Verse 13
Areca nut
Verse 14
Banana
Verse 15
Fruits
Verse 16
Turmeric
Verse 17
Sandalwood
Verse 18
Vermilion
Verse 19
White rangoli powder
Verse 20
Akshata (unbroken rice mixed with turmeric)
Verse 21
Rice
Verse 22
Oil lamp
Verse 23
Incense
Verse 24
Camphor
Verse 25
Plate
Verse 26
Method of performing Varalakshmi Puja:
Verse 27
On the day of Varalakshmi Puja, wake up early and take a bath.
Verse 28
The fast begins at sunrise and continues until sunset or until the puja is completed.
Verse 29
Purify the puja area with Ganga water or regular water.
Verse 30
Apply turmeric mixed with water on a wooden plank or pedestal, and then draw a rangoli with rice powder.
Verse 31
Then place some akshata in the center of the pedestal and place a metal plate on it.
Verse 32
Spread raw rice evenly on the plate.
Verse 33
Apply turmeric and kumkum on the kalasha and place it in the center of the plate.
Verse 34
Pour water into the kalasha, add some akshata, and place a whole coconut on top of the kalasha.
Verse 35
Place the face of Goddess Lakshmi on the coconut.
Verse 36
Drape a saree around the kalasha, adorn it with ornaments, and place a flower garland.
Verse 37
Place the mirror behind the deity.
Verse 38
Then light the oil lamp.
Verse 39
Place the yellow colored thread in front of Goddess Lakshmi.
Verse 40
After decorating the deity, offer prayers to Ganesha.
Verse 41
Then chant the sacred mantras dedicated to Goddess Varalakshmi. You can also chant the Mahalakshmi Sahasranama Stotram.
Verse 42
Offer flowers one by one and then offer betel leaves (tamboola).
Verse 43
Then offer Naivedya (food offering) to the Goddess.
Verse 44
Then perform Aarti for the Goddess and conclude the puja by tying the sacred thread around your right wrist.
Verse 45
The rules of Varalakshmi Vratha must be strictly followed. This Vratha is undertaken by married women. Through this Vratha, they pray to Goddess Lakshmi, saying 'Mother, please increase the health of my husband and children, enhance the prosperity of the home, and establish peace and tranquility in the house.'
Verse 46
According to Hindu tradition, observing Varalakshmi Vratha is considered equivalent to worshipping the Ashtalakshmi. By observing Varalakshmi Vratha, one attains wealth, progeny, knowledge, love, success, peace, courage, and all such forms of prosperity.
Verse 47
In 2021, Varalakshmi Vratha is being observed on August 20th. Through Varalakshmi Vratha, the Ashtalakshmi are worshipped.
Verse 48
* Adi Lakshmi (Primeval Lakshmi) * Dhana Lakshmi (Wealth Lakshmi) * Dhairya Lakshmi (Courage Lakshmi) * Saubhagya Lakshmi (Good Fortune Lakshmi) * Vijaya Lakshmi (Victory Lakshmi) * Dhanya Lakshmi (Grain Lakshmi) * Santana Lakshmi (Progeny Lakshmi) * Vidya Lakshmi (Knowledge Lakshmi)
Verse 49
Items required for Varalakshmi Vratha: * First, a pedestal (mane) is needed. * Then, a cloth to place on the pedestal. * Rice flour for making rangoli. * Two coconuts (one for the Kalasha, another for the puja). * A Kalasha pot (copper or silver). * To fill the Kalasha pot: rice, dried dates, cashews, raisins, almonds, rock sugar, and various fruits. (This
Verse 50
Two elephants to be placed near the Goddess.
Verse 51
Turmeric root.
Verse 52
Green bangles.
Verse 53
A saree to adorn the Goddess.
Verse 54
A blouse piece for Tamboola (betel leaf offering).
Verse 55
And a few more blouse pieces.
Verse 56
Turmeric powder.
Verse 57
Vermilion (Kumkum).
Verse 58
Akshata (rice grains mixed with turmeric and kumkum).
Verse 59
Loose flowers.
Verse 60
Sandalwood paste.
Verse 61
Betel leaves.
Verse 62
Areca nut.
Verse 63
Dates.
Verse 64
Incense sticks.
Verse 65
Coins.
Verse 66
Mango leaf garland.
Verse 67
Banana.
Verse 68
9 white threads.
Verse 69
Snacks and eatables.
Verse 70
Lamp oil or cow's ghee.
Verse 71
Wicks.
Verse 72
Camphor.
Verse 73
(Keep all these items ready beforehand.)
Verse 74
Wake up early in the morning, preferably during Brahma Muhurta, take a bath, wear clean clothes, clean the house, draw rangoli, and prepare for Naivedya (offerings).
Verse 75
At the puja spot, facing east, draw an eight-petaled lotus rangoli. Light lamps on both sides of the mandapa. Apply turmeric and kumkum to the lamps and place flowers. Then, take 5 handfuls of rice in a bowl, spread it, place it in the center of the rangoli, draw a Swastika, and then place the Kalasha (pot).
Verse 76
Fill the Kalasha with the required items, then apply sandalwood paste and add Akshata. Place 5 betel leaves on it. Now, place a coconut on the Kalasha such that its two 'eyes' face forward. Decorate the coconut beforehand by applying turmeric.
Verse 77
Place the Goddess's mask on top of it. Then, apply turmeric and kumkum to the mask, adorn it with kajal. Place turmeric, kumkum, bangles, etc., next to the Goddess. Place thirty-two coins in front of the Goddess. Tie a Mangalya Sara (sacred necklace) and a turmeric root with a thread and offer it to the Goddess.
Verse 78
Then, decorate with ornaments. Adorn with lotus flowers. A photo of the Goddess can be placed behind the Kalasha. Place five or nine types of fruits.
Verse 79
Then, prepare Madalikki. Prepare it using two betel leaves, areca nut, bangles, blouse piece, coconut, rice, flowers, fruits, and dry coconut.
Verse 80
First, worship Lord Ganesha.
Verse 81
Then, take water in a Pancha Patra (five-vessel set), add flowers to it, and sprinkle it on the Goddess.
Verse 82
Place a small idol of Lakshmi on a plate, place betel leaves on it, and keep the Panchamrita (five nectars) ready for Abhisheka. Dip a flower in the Panchamrita and offer it to the Goddess. Afterwards, apply turmeric, kumkum, kajal to the Goddess, and offer Gandhakshate (sandalwood paste mixed with rice).
Verse 83
Then, perform Sahasraarchana (offering a thousand names) to the Goddess with flowers. Afterwards, perform Kumkumaarchana (offering kumkum), chanting Ashtottara (108 names). Then, perform Aarti to the Goddess with incense and lamps, break a coconut, and offer Naivedya. Now, offer banana and milk as Naivedya to the Goddess, and finally perform Mangalaarati (auspicious lamp waving).
Verse 84
Then, apply turmeric and kumkum to the Varamahalakshmi Vrat Katha book, place flowers, and offer obeisance. Read the Vrat story.
Verse 85
Bow to the Aarti, take Akshata in hand, make a Sankalpa (vow), then offer that Akshata to the Goddess, circumambulate, and offer obeisance.
Verse 86
After the puja, tie the nine-strand thread with a flower and have it tied on your wrist by an elder of the house. Then, offer Tamboola to married women (muttaideyaru).
Verse 87
Before performing Visarjane (immersion/farewell), perform Mangalaarati, gently move the Kalasha slightly to the right, and then perform Visarjane.
Verse 88
Varalakshmi Devi: The day of Varalakshmi Puja is one of the significant days to worship the Goddess of wealth and prosperity. Varalakshmi, the consort of Lord Vishnu, is one of the forms of Goddess Mahalakshmi. She emerged from the Ksheera Sagara (ocean of milk) during Samudra Manthana. She is described as having the complexion of the milky ocean and adorning clothes of the same color. It is believed that the Varalakshmi form of the Goddess grants boons and fulfills all desires of her devotees. Therefore, this form of the Goddess is called Vara + Lakshmi, meaning the Goddess Lakshmi who grants boons.
Verse 89
Varalakshmi Vrat: The Varalakshmi fast is observed on the last Friday of Shravana Shukla Paksha. Varalakshmi Vrat is prescribed not only for women but also for men. However, in Andhra, Telangana, and Maharashtra regions, the Varalakshmi fast is mainly observed by married women. The Varalakshmi fast is performed with the desire for worldly happiness, and it includes progeny, spouse, good fortune, and all kinds of earthly pleasures.
Verse 90
In some states, Varalakshmi Puja is mostly performed by married women for their husbands and other family members.
Verse 91
It is performed for the well-being of family members. It is believed that worshipping Varalakshmi Devi on this day is equivalent to worshipping the Ashta Lakshmi, meaning wealth (Shri), earth (Bhu), learning (Saraswati), love (Priti), fame (Kirti), peace (Shanti), joy (Tushti), and strength (Pushti). Varalakshmi Vrat is one of the most auspicious days to receive the blessings of Goddess Lakshmi and become worthy of her grace.
Verse 92
Varalakshmi Puja Muhurta: According to astrology, the auspicious time to worship Goddess Lakshmi is during the Sthira Lagna (fixed ascendant). It is believed that performing Lakshmi Puja during Sthira Lagna can bring long-term prosperity. On Varalakshmi Vrat, there are four Sthira Lagnas for Lakshmi Puja. Any suitable time can be chosen for Varalakshmi Puja. However, the evening time overlapping with Pradosha is considered the most auspicious for worshipping Goddess Lakshmi.
Verse 93
Varalakshmi Vrat 2021 Muhurta - Simha Lagna Puja Muhurta (Morning): From 6:18 AM to 8:19 AM. Puja Duration: 2 hours 1 minute.
Verse 94
- Vrischika Lagna Puja Muhurta (Afternoon): From 12:44 PM to 3:00 PM. Puja Duration: 2 hours 16 minutes.
Verse 95
- Kumbha Lagna Puja Muhurta (Evening): From 6:52 PM to 8:25 PM. Puja Duration: 1 hour 33 minutes.
Verse 96
- Vrishabha Lagna Puja Muhurta (Midnight): On Friday, August 20, 2021, from 11:36 PM to Saturday, August 21, 2021, 1:34 AM. Puja Duration: 1 hour 58 minutes.
Verse 97
Varalakshmi Puja Procedure: The rituals and procedures of Varalakshmi Puja are similar to those performed for Mahalakshmi Puja during the Diwali festival. However, the steps and mantras of this puja include Doraka and Vayana. The sacred thread tied during Varalakshmi Puja is called Doraka, and the sweets offered to Varalakshmi are called Vayana.
Verse 98
Varamahalakshmi Puja Items: Flower garland, Kumkum, Turmeric, Sandalwood powder or paste, Vibhuti, Mirror, Comb, Mango leaves, Flowers, Betel leaves, Panchamrita, Curd, Banana, Milk, Water, Incense sticks, Red and yellow cotton thread, Sambrani (Dhoop), Camphor, Bell, Prasad, Two oil lamps, Akshata (unbroken rice).

Spiritual Benefits

Performing Varalakshmi Puja according to the prescribed rituals brings the full blessings of Goddess Lakshmi, leading to prosperity, wealth, and overall well-being for the family.

📜About this Katha

The Varalakshmi Vrat is a significant Hindu observance primarily performed by married women to seek blessings from Goddess Lakshmi for the prosperity and well-being of their families. This authentic knowledge, brought to you by shyamstuti.in, details the essential puja items (samagri) and the step-by-step procedure (vidhi) for performing the Varalakshmi Puja, ensuring devotees can conduct the ritual correctly and devoutly.

Frequently Asked Questions

What is the spiritual significance of observing Varalakshmi Vrat?

The Varalakshmi Vrat is observed to invoke Goddess Lakshmi, the deity of wealth, prosperity, and auspiciousness. It is believed that by performing this vrat with devotion, married women can seek blessings for the well-being, longevity, and prosperity of their husbands and families, ensuring a harmonious and abundant life.

How does the Varalakshmi Vrat contribute to inner spiritual growth?

Beyond material blessings, observing the Varalakshmi Vrat fosters spiritual discipline, devotion, and gratitude. The fasting, prayers, and rituals encourage introspection, purification of mind, and a deeper connection with the divine feminine energy, leading to inner peace and spiritual upliftment.

What is the philosophical meaning behind the offerings made during Varalakshmi Puja?

The offerings made during Varalakshmi Puja, such as flowers, fruits, sweets, and new clothes, symbolize devotion, surrender, and gratitude. Each offering represents a facet of life that is offered to the divine, signifying a desire for purity, abundance, and the removal of obstacles, while acknowledging Goddess Lakshmi as the ultimate provider of all good things.

Explore More Devotion